Bheemanagouda Patil

Bijapur

Bheemanagouda Patil

Bijapur

ಶ್ರೀ ಭೀಮನಗೌಡ ಪಾಟೀಲ ಅವರು ೧೯೬೯ ಅಕ್ಟೋಬರ್ ೫ ರಂದು ಬಸವ ಜನ್ಮಸ್ಥಳವಾದ ಬಸವನ ಬಾಗೇವಾಡಿ ತಾಲೂಕಿನ ಸಾಸನೂರ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸಾಸನೂರಿನ ಸರಕಾರಿ ಶಾಲೆಯಲ್ಲಿ ಮುಗಿಸಿ, ಪ್ರೌಡಶಿಕ್ಷಣವನ್ನು ಪಕ್ಕದ ಹಳ್ಳಿಯಾದ ಹಿರೂರು ಗ್ರಾಮದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಇನ್ನೇನು ಕಾಲೇಜು ಮೆಟ್ಟಿಲು ಏರಿ ಧೈತ್ಯ ಪ್ರತಿಬೆಯಾಗಿ ಹೊರಹೊಮ್ಮುವಷ್ಟರಲ್ಲಿ ಘೋರ ವಿಧಿಯಾಟವೊಂದು ಅವರ ಬದುಕಲ್ಲಿ ಆಟವಾಡಿ ಶಾಶ್ವತ ಅಂಗವಿಕತೆಗೆ ಕಾರಣವಾಯಿತು.ಅಂದಿನಿಂದ ವಿಕಲಚೇತನರಿಗಾಗುವ ಯಾವುದೇ ತರಹದ ಅನ್ಯಾಯದ ವಿರುದ್ದ ಸಿಡಿದೆದ್ದು ಹೋರಾಟ ಮಾಡುತ್ತಾ, ಅಂಗವಿಕಲರಿಗೆ ಸರಕಾರಿ ಸವಲತ್ತುಗಳನ್ನು ಕೊಡಿಸುತ್ತಾ ಹಾಗೂ ಪ್ರೋತ್ಸಾಹವನ್ನು ನೀಡುತ್ತಾ ಶ್ರಮಿಸುತ್ತಿದ್ದಾರೆ. ಇದೆಲ್ಲದರ ಪ್ರತಿಫಲವಾಗಿ ಕರ್ನಾಟಕ ಗ್ರಾಮೀಣ ಕನ್ನಡ ವಿಕಲಚೇತನರ ಸಂಘ(ರಿ) ವನ್ನು ಸ್ವಂತ ಊರಿನಲ್ಲಿ ಸ್ಥಾಪಿಸಿ ಅದರ ಅಧ್ಯಕ್ಷರಾಗಿ, ಬಸವನ ಬಾಗೇವಾಡಿ ತಾಲೂಕಿನ ವಿಕಲಚೇತನರ ಗೌರವಾಧ್ಯಕ್ಷರಾಗಿ, ರಾಜ್ಯ ಹೋರಾಟ ಸಮಿತಿ ಸದಸ್ಯರಾಗಿ ಮತ್ತು ವಿಜಾಪುರ ಜಿಲ್ಲೆಯ ವಿಕಲಚೇತನರ ಸಹಕಾರಿ ಬ್ಯಾಂಕಿನ ಉಪಾಧ್ಯಾಕ್ಷರಾಗಿ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ಅಂಗವಿಕಲರ ಯಾವುದೇ ಸಮಸ್ಯೆಗಳಿಗೆ ಈ Website ಮುಖಾಂತರ ಅವರನ್ನು ಸಂಪರ್ಕಿಸಬಹುದಾಗಿದೆ.