ಕೆ.ಜೆ. ಜಾರ್ಜ್
ನನ್ನೆರಡು ಮಾತುಗಳು: ಬೈಬಲ್‌ನ ಎರಡು ಬ್ಲಾಗ್‌ಗಳು ಅಂತರಜಾಲದಲ್ಲಿ ನೋಡಲು ಸಿಗುತ್ತಾವಾದರೂ ಅವುಗಳ ಭಾಷೆ, ಅರ್ಥವ್ಯಾಪ್ತಿಯ ಬಗ್ಗೆ ನೂರೆಂಟು ತೊಡಕುಗಳಿರುವ ಕಾರಣದಿಂದಾಗಿ ಸರಳವಾದ ಕನ್ನಡ ಭಾಷೆಯ ಬೈಬಲ್ ಎಲ್ಲರಿಗೂ ಓದಲು ದಕ್ಕಲಿ ಮತ್ತು ಬೈಬಲ್ ವಾಕ್ಯಗಳನ್ನು ಓದುವವರು ಸರಿಯಾಗಿ ಆ ವಾಕ್ಯಗಳನ್ನು ಅರ್ಥೈಸಿಕೊಳ್ಳಲಿ ಎಂಬ ಉದ್ದೇಶವನ್ನಿರಿಸಿಕೊಂಡು ಈ ಬ್ಲಾಗನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಇದು 'ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮಿತಿ, ಬೆಂಗಳೂರು', ಸಿದ್ಧಪಡಿಸಿದ ಸರಳ ಭಾಷಾಂತರ ಕೃತಿಯ ಯಥಾವತ್ತು ನಕಲಾದರೂ ನಾನದನ್ನು ನನ್ನದೇ ಆದ ರೀತಿಯಲ್ಲಿ ಅಗತ್ಯವಾದ ಚಿತ್ರಗಳ ಸಹಾಯದಿಂದ ಪ್ರಸ್ತುತ ಪಡಿಸಿದ್ದೇನೆ.