gurudghalli

ನಾನು ಗುರು ಡಿಜಿಹಳ್ಳಿ. ಡಿಜಿಹಳ್ಳಿ ನಮ್ಮೂರು. ಓದಿದ್ದು, ಕಲಿತಿದ್ದು ಎಲ್ಲಾ ಲೊಳಲೊಟ್ಟೆ. ಯಾಕಂದ್ರೆ ಮೇಷ್ಟ್ರು ಹೇಳಿದ ಪಾಠ ಯಾವುದು ತಲೆಗತ್ಲಿಲ್ಲ. ಶಾಲೆಗೆ ಹೋಗೋಕೆ ರಚ್ಚೆ ಹಿಡಿತಿದ್ದ ನಾನು ಈಗ ಶಿಕ್ಷಕ ಆಗಿ ದಿನ ಶಾಲೆಗೆ ಹೋಗುತ್ತಿರೋದು ನನ್ನ ಬದುಕಿನ ದುರಂತವೇ ಸರಿ. ಹಾಗಂತ ನಾನು ಈ ಕೆಲಸವನ್ನು ಅಲಕ್ಷಿಲ್ಲ. ‘Do what you love and love what you do’ ಅನ್ನೋತರಹ ನಾನು ನನ್ನ ಕೆಲಸವನ್ನು ಪ್ರೀತಿಸ್ತಿದೀನಿ. ನಂಗೆ ‘ಪೂರ್ಣಚಂದ್ರ ತೇಜಸ್ವಿ’ ಅಂದ್ರೆ ತುಂಬಾನೇ ಇಷ್ಟ. ಇದಕ್ಕೂ ಹೆಚ್ಚು ಹೇಳಲಿಕ್ಕೆ ಏನು ಇಲ್ಲ ಹೇಳಿದ್ರೂ ಕಂತೆ ಪುರಾಣ ಅಷ್ಟೇ!

ಗದ್ಯ-ಪದ್ಯ, ಕಾವ್ಯ-ಮಹಾಕಾವ್ಯ, ಕವಿತೆ, ನೀಳ್ಗತೆ, ಹಾಡು, ಕತೆ, ಕಾದಂಬರಿ, ಚುಟುಕಗಳು ಹೀಗೆ ನೂರೆಂಟು ವಿಧದ ಸಾಹಿತ್ಯವೆಂಬ ಸಾಗರದಲ್ಲಿ ಒಂದು ಹನಿಯ ಒಂದಂಶದ ಒಂದಂಶವಾದರೂ ಬದುಕು ಸಾರ್ಥಕವಾಗುತ್ತದೆನಿಸುತ್ತದೆ. ನನಗನಿಸಿದ್ದು, ಮನದಲ್ಲಿ ಹಾಯ್ದದ್ದು, ಅನುಭವಿಸಿದ್ದನ್ನು ಬರವಣಿಗೆ ರೂಪದಲ್ಲಿ ತರಲಿಕ್ಕೆ ‘ನಿರುತ್ತರ’ ವೇದಿಕೆಯಾಗಿದೆ.

ನಿಮ್ಮ ಟೀಕೆ-ಟಿಪ್ಪಣಿ-ಮಾರ್ಗದರ್ಶನದ ನಿರೀಕ್ಷೆಯಲ್ಲಿ..