Jayashree Deshpande

Jayashree Deshpande

ನಿಮ್ಮೆಲ್ಲರಿಗೂ ಅಂತರ್ಮನದ ಸ್ವಾಗತ.

ಎರಡು ಅಲೆಗಳ ನಡುವಿರುವ ಮನಸ್ಸು ನಮ್ಮದು. ಭೌತಿಕ ಮತ್ತು ಅ೦ತರ್ಗತ ಭಾವನಾತ್ಮಕ ಅಲೆಗಳು. ಇವೆರಡರ ಪ್ರಭಾವದಲ್ಲಿ ಮೂಡಿಬರುವ ಅಕ್ಷರಗಳು ಬರಹಗಳಾಗಿ ಹಲವು ರೂಪಗಳನ್ನು ತಳೆದದ್ದನ್ನು ನಿಮ್ಮೆದುರು ತೆರೆದಿಡಲು ಬಯಸುತ್ತೇನೆ. ಓದು ಬರಹಗಳು ನನ್ನ ಆಸಕ್ತಿ, ಅಪೇಕ್ಷೆ , ಹವ್ಯಾಸವಾಗಿ ಅನೇಕ ವರ್ಷಗಳಿ೦ದ ನನ್ನ ಜೊತೆಗೂಡಿ ಸಾಗಿವೆ. ಭೌತಿಕ ಅನುಭವಗಳಲ್ಲಿ ಜಗದ ಹಲವು ತಾಣಗಳಲ್ಲಿ ಹೆಜ್ಜೆಹಾಕಿ ಬ೦ದ ನೆನಪುಗಳಿವೆ. ಬಾಲ್ಯದ ಸವಿನೆನಪುಗಳಿವೆ. ಕ೦ಡು೦ಡ ಜೀವನವಿದೆ. ಜೀವಕ್ಕೆ ಎದುರಾಗುವ ಇನ್ನೂ ಅನೇಕ ಭಾವಗಳು ಬರವಣಿಗೆಯಾಗಿ ನನ್ನೊಡನೆ ಚಲಿಸುತ್ತಿವೆ…ಒ೦ದು ಬಾರಿ ಕಣ್ಣಾಡಿಸಿ ನೋಡಿ!

ನಿಮ್ಮ ಅನಿಸಿಕೆಗಳ ನಿರೀಕ್ಷೆಯಲ್ಲಿ…

ಜಯಶ್ರೀ ದೇಶಪಾಂಡೆ