Ramakant Gugri

Bangalore, Karnataka, India

ಕನ್ನಡCircle ಯಾಕೆ?

ಇಂಟರ್ನೆಟ್ ನ ಯಾವುದೋ ಮೂಲೆಯಲ್ಲಿರುವ ಕನ್ನಡವನ್ನು ಮುಖ್ಯ ವಾಹಿನಿಗೆ ತಂದು, ಅದನ್ನು ಇನ್ನೂ ಹೆಚ್ಚು ಬಳಕೆಯಾಗುವಂತೆ ಮಾಡುವುದೇ ಕನ್ನಡCircle ಗುರಿ. ವೆಬ್ ಲೋಕದಲ್ಲಿ ಹರಿದು ಹಂಚಿ ಹೋಗಿರುವ ಕನ್ನಡ ತಾಣಗಳೆಲ್ಲವನ್ನೂ ಒಂದೆಡೆ ತಂದು ಏಕಕಾಲಕ್ಕೇ ಸಿಗುವಂತೆ ಮಾಡುವ ಮಹತ್ವಾಂಕ್ಷೆಯೇ ಕನ್ನಡCircle ಉದ್ಭವಕ್ಕೆ ಕಾರಣ. ಒಮ್ಮೆ ಕನ್ನಡCircle ಗೆ ಬಂದರೆ ಸಾಕು, ಕಣ್ಣು ಮಚ್ಚಿಕೊಂಡು ಬೇಕಾದ ತಾಣವನ್ನು ತಲುಪಬಹುದು. ಇಂಟರ್ನೆಟ್ನಲ್ಲಿ ಎಲ್ಲವೂ ಇಂಗ್ಲೀಷ್ಮಯವಾಗಿದ್ದು ಕನ್ನಡ ಬಳಕೆಯೇ ಕಡಿಮೆಯಾಗಿದೆ. ಇರುವ ಅಷ್ಟೋ ಇಷ್ಟೋ ಕನ್ನಡದ ವೆಬ್ ಸೈಟ್ಸ್, ಬ್ಲಾಗ್ಸ್, ಮಾಹಿತಿಗಳೆಲ್ಲವೂ ಚದುರಿಹೋಗಿವೆ. ಒಂದು ಮಾಹಿತಿ ಹುಡುಕಬೇಕಾದರೂ ಹಲವು ಗಂಟೆ ಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರ ನೀಡಲೆಂದೇ ಕನ್ನಡCircle ರಚನೆಯಾಗಿದೆ. ಈ ಸರ್ಕಲ್ ಗೆ ಬಂದರೇ ಸಾಕು ಕನ್ನಡದ ಎಲ್ಲಾ ತಾಣಗಳನ್ನು ಇಲ್ಲಿಂದ ಸುಲಭವಾಗಿ ತಲುಪಬಹುದು. ಬೇಕಾದ ಮಾಹಿತಿ ಕ್ಷಣ ಮಾತ್ರದಲ್ಲೇ ಪಡೆಯಬಹುದು. ಇದರಿಂದ ನಿಮ್ಮ ಅಮೂಲ್ಯ ಸಮಯ, ಶ್ರಮವನ್ನೂ ಉಳಿಸಬಹುದು.

ಕನ್ನಡದCircle ನಿಂದ ಲಾಭವೇನು ?

ವೆಬ್ ಪ್ರಪಂಚದಲ್ಲಿ ಕನ್ನಡ ಭಾಷೆಯು ಈ ಮೂಲಕ ಹೆಚ್ಚು ಜನರನ್ನು ತಲುಪುವಂತಾಗುತ್ತದೆ. ಇಂಟರ್ ನೆಟ್ ನತ್ತ
ಹೊಸಬರನ್ನು ಸೆಳೆಯಲು ಪ್ರಚಾರ ಹಾಗೂ ಪ್ರಸ್ತುತಯಿರುವ ಅಂತರ್ಜಾಲಿಗರಿಗೆ ಇದನ್ನು ತಲುಪಿಸುವುದು ಕನ್ನಡCircle ನ ಮೊದಲ ಗುರಿಯಾಗಿರುತ್ತದೆ. ಇಂಟರ್ ನೆಟ್ ನಲ್ಲಿ ಕನ್ನಡ ಬಳಕೆ ತೀರಾ ಕಡಿಮೆಯಿದ್ದರೂ
ಬಳಕೆದಾರರ ಸಂಖ್ಯೆ ಏನೂ ಕಡಿಮೆಯಿಲ್ಲ. ಲಕ್ಷಾಂತರ ಕನ್ನಡ ಬಳಕೆದಾರರು ಇಂಟರ್ ನೆಟ್ ಬಳಸುತ್ತಿದ್ದರೂ, ಅದರಲ್ಲಿ ಕನ್ನಡ ಬಳಸುತ್ತಿರುವವರು ತೀರಾ ಕಡಿಮೆ. ಆದ್ದರಿಂದ ಇವರೆಲ್ಲರಿಗೂ ಕನ್ನಡCircle ಸಂಪೂರ್ಣ
ಉಪಯೋಗವಾಗಲಿದೆ. ಇದರಿಂದ ಕನ್ನಡದ ಬಳಕೆ ಅಧಿಕವಾಗಲು ಕನ್ನಡCircle ಉತ್ತಮ ಸಲಕರಣೆಯಾಗಲಿದೆ.

ಉದ್ದೇಶ ಏನು?

ಹೊಸ ಸವಾಲುಗಳಿಗೆ ಒಗ್ಗಿಕೊಂಡು ಕನ್ನಡ ಕಟ್ಟಿ, ಬೆಳೆಸುವ ನಿಟ್ಟಿನಲ್ಲಿ ಎಲ್ಲರಿಗೂ ಎಲ್ಲದ್ದಕ್ಕೂ ಕನ್ನಡCircle ನಲ್ಲಿ ಜಾಗ ಇದೆ. ವಿಶ್ವದ ಯಾವುದೇ ಭಾಗದಲ್ಲಿ ನೆಲೆಸಿರುವ ಕನ್ನಡಿಗ ತನ್ನ ತಾಣವನ್ನು ಇಲ್ಲಿ ಸೇರಿಸಿ ಹೆಚ್ಚು ಹೆಚ್ಚು ಜನರನ್ನು ತಲುಪಬಹುದು. ತಾನೂ ಬೆಳೆಯ���ತ್ತಾ ಕನ್ನಡವನ್ನೂ ಇನ್ನಷ್ಟು ಎತ್ತರಕ್ಕೆ ಕರೆದೊಯ್ಯುವಂತಾಗಬೇಕು. ಇಲ್ಲಿ ಯಾವುದೇ ವಾಣಿಜ್ಯ ಉದ್ದೇಶಕ್ಕಿಂತ ಅಂತರ್ಜಾಲದಲ್ಲಿ ಕನ್ನಡವನ್ನು ಎಲ್ಲರೂ ಹೆಚ್ಚು ಹೆಚ್ಚು ಬಳಸುವಂತೆ ಮಾಡುವುದು ಹಾಗೂ ಒಂದೇ ಸೂರಿನಡಿ ಕನ್ನಡದ ಎಲ್ಲಾ ತಾಣಗಳನ್ನು ಕೂಡಿ ಹಾಕುವುದು ಕನ್ನಡCircle ನ ಉದ್ದೇಶ.

ಪ್ರೀತಿಯಿಂದ

ರಮಾಕಾಂತ ಗುಗ್ರಿ

ಪ್ರಧಾನ ಸಂಪಾದಕ, ಕನ್ನಡCircle

http://www.kannadacircle.in/